Saturday, August 6, 2011

ಭಕ್ತಿಮಾರ್ಗ-ಜ್ಞಾನಮಾರ್ಗ

ಶಿವ-ಕೇಶವರ ಭಕ್ತಿಮಾರ್ಗ
ಶಿವಶ್ಚ ಹೃದಯಂ ವಿಷ್ಣುಃ
ವಿಷ್ಣೋಶ್ಚ ಹೃದಯಂ ಶಿವಃ
ಶಿವನ ಹೃದಯದಲ್ಲಿ ವಿಷ್ಣು ಇದ್ದಾನೆ. ವಿಷ್ಣುವಿನ ಹೃದಯದಲ್ಲಿ ಶಿವನಿದ್ದಾನೆ. ಅಂದಹಾಗೆ  ವಿಷ್ಣುವಿಲ್ಲದೇ ಶಿವನಿಲ್ಲ; ಶಿವನಿಲ್ಲದೇ ವಿಷ್ಣುವಿಲ್ಲ.
ಶಿವ ಕೇಶವ ಇಬ್ಬರಲ್ಲೂ ಭಕ್ತಿಮಾರ್ಗವಿದೆ. ಭಕ್ತಿಮಾರ್ಗದಲ್ಲಿ ಪರಬ್ರಹ್ಮನಿದ್ದಾನೆ.
ಭಕ್ತರ ಭವರೋಗ ನಿವಾರಣೆ ಮಾಡಲು ಶಿವ ಕೇಶವರ ಭಕ್ತಿಮಾರ್ಗವು ಅನನ್ಯ.
ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ.
ತಸ್ಮಾದ್ ಸರ್ವಗತಂ ಬ್ರಹ್ಮ|
ನಿತ್ಯಂ ಯಜ್ಞೇ ಪ್ರತಿಷ್ಠಿತಂ||
ಬ್ರಹ್ಮನ ನಿತ್ಯ ಯಜ್ಞವಾದರೂ ಯಾವುದು?
ಜ್ಞಾನಯಜ್ಞವೇ ನಿತ್ಯ ಯಜ್ಞ. ಆ ಯಜ್ಞದಲ್ಲಿ ಬ್ರಹ್ಮನಿದ್ದಾನೆ.
ಬ್ರಹ್ಮನಿಗಿಂತಲೂ ಬ್ರಹ್ಮಜ್ಞಾನ ದೊಡ್ಡದು.
ಅಂತೆಯೇ ಬ್ರಹ್ಮ ತಾನು ಪೂಜೆಗೆ ಅರ್ಹನಲ್ಲವೆಂಬುದನ್ನು ಒಪ್ಪಿಕೊಂಡು, ದಾರ್ಶನಿಕತೆ ತೋರಿದ್ದಾನೆ. ಅವನು ಪೂಜಾರ್ಹನಾಗಬಾರದೆಂಬುದಕ್ಕೆ ಭೃಗಮಹರ್ಷಿಯ ಶಾಪವೊಂದು ನಿಮಿತ್ತ ಮಾತ್ರವಾಯಿತಷ್ಟೇ.
ನಾವು ಗಮನಿಸಿದಂತೇ ಎಲ್ಲ ಶುಭಕಾರ್ಯ ಕಲಾಪಗಳಲ್ಲಿ ಬ್ರಹ್ಮನಿದ್ದಾನೆ. ಆತನ ಬ್ರಹ್ಮತ್ವವಿದೆ; ವೇದಷೋಷಗಳಿವೆ. ಮಂಗಲಾಷ್ಟಕಗಳಿವೆ.

No comments: